Breaking

6/trending/recent
Type Here to Get Search Results !

ಬೆಟ್ಟಂಪಾಡಿ ಕಾಲೇಜಿನ ಎನ್ಎಸ್ಎಸ್ ಘಟಕಗಳಿಂದ ಗ್ರಂಥ ಮಿತ್ರಕ್ಕೆ ಚಾಲನೆ

ಜಾಹೀರಾತು/Advertisment
ಬೆಟ್ಟಂಪಾಡಿ ಕಾಲೇಜಿನ ಎನ್ಎಸ್ಎಸ್ ಘಟಕಗಳಿಂದ ಗ್ರಂಥ ಮಿತ್ರಕ್ಕೆ ಚಾಲನೆ

ಓದುವ ಹವ್ಯಾಸಕ್ಕೆ ಸ್ಪೂರ್ತಿ 'ಗ್ರಂಥ ಮಿತ್ರ': ವಿಜಯ್ ಕುಮಾರ್
ಓದುವ ಹವ್ಯಾಸಕ್ಕೆ ಸ್ಪೂರ್ತಿ 'ಗ್ರಂಥ ಮಿತ್ರ' ಕಾರ್ಯಕ್ರಮವಾಗಲಿದೆ. ಶಾಲಾ ಮಕ್ಕಳಲ್ಲಿ ಓದಿನ ಆಸಕ್ತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಾಲಾ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ವಿಷಯಗಳ ಜತೆಗೆ ಡಿಜಿಟಲ್ ಲೈಬ್ರರಿಯನ್ನು ಬಳಸುವ ಮೂಲಕ ಸಾಮಾನ್ಯ ಜ್ಞಾನವನ್ನು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ಇಲ್ಲಿನ ಮುಖ್ಯ ಶಿಕ್ಷಕರಾದ ವಿಜಯ್ ಕುಮಾರ್ ಇವರು ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಹಾಗೂ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆದ 'ಗ್ರಂಥ ಮಿತ್ರ' ಎಂಬ ವಿದ್ಯಾರ್ಥಿ ಸ್ನೇಹಿ ಅಭಿಯಾನ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಎನ್ ಎಸ್ ಎಸ್ ಸ್ವಯಂ ಸೇವಕರು ಶಾಲಾ ಮಕ್ಕಳಿಗೆ ಪ್ರತಿ ಶನಿವಾರ ಕೌಶಲ್ಯ ತರಬೇತಿಗಳನ್ನು ನೀಡಲಿರುವ 'ಗ್ರಂಥ ಮಿತ್ರ' ಯೋಜನೆ ಉತ್ತಮ ಕಾರ್ಯ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶ್ರೀ ಹರಿಪ್ರಸಾದ್ ಎಸ್ ಇವರು ಮಾತನಾಡಿ ಮಕ್ಕಳಿಗೆ ಬೇರೆ ಬೇರೆ ಮೂಲಗಳಿಂದ ಜ್ಞಾನ ಸಿಗುತ್ತದೆ. ಆದರೆ ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳಿಂದ ದೊರೆಯುವ ಜ್ಞಾನ ತುಂಬಾ ಮಹತ್ವವನ್ನು ಪಡೆದಿದೆ. ಪ್ರೌಢಶಾಲಾ ಮಕ್ಕಳ ಕಲಿಕೆ, ಭಾಷಾ ಬೆಳವಣಿಗೆ, ಮಾತುಗಾರಿಕೆ, ಆತ್ಮವಿಶ್ವಾಸ ವೃದ್ಧಿಸುವ ಪಠ್ಯ ಕ್ರಮವನ್ನು ಒಳಗೊಂಡಿರುವ 'ಗ್ರಂಥ ಮಿತ್ರ ' ಕಾರ್ಯಕ್ರಮದ ಪ್ರಯೋಜನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.  
ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ಗ್ರಾಮ ಪಂಚಾಯತಿನ ಸಾರ್ವಜನಿಕ ಗ್ರಂಥಾಲಯದ ಮುಖ್ಯಸ್ಥರಾದ ಶ್ರೀಮತಿ ಪ್ರೇಮಲತಾ ಇವರು ಮಾತನಾಡಿ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಅವಶ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮನರಂಜನೆಯನ್ನು ನೀಡುವ ಮೂಲಕ ಕಲಿಕೆಯತ್ತ ಅವರನ್ನು ಸೆಳೆಯಲಾಗುತ್ತದೆ. ನಂತರ ಡಿಜಿಟಲ್ ಕೌಶಲ್ಯಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಗ್ರಂಥ ಮಿತ್ರದ ಸದಸ್ಯರಿಂದ ವಿದ್ಯಾರ್ಥಿಗಳಿಗೆ ಜ್ಞಾನಾಭಿವೃದ್ಧಿ ವೃದ್ಧಿಸುವ ಹಲವು ಚಟುವಟಿಕೆಗಳನ್ನು ನಡೆಸಲಾಯಿತು.

ಸರ್ಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶ್ರೀ ಶಶಿಕುಮಾರ ಹಾಗೂ ಗ್ರಂಥ ಮಿತ್ರದ ನಾಯಕರಾದ ರಕ್ಷಿತಾ ಕೆ ಹಾಗೂ ಸಹ ನಾಯಕಿಯಾದ ಪಲ್ಲವಿ ಬಿ ರೈ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 ಸ್ವಯಂಸೇವಕಿಯರಾದ ದೀಪ್ತಿ ಪಿ ಸ್ವಾಗತಿಸಿದರು. ಕೃತಿಕಾ ಪಿ ವಂದನಾರ್ಪಣೆಗೈದರು. ಹರ್ಷಿತಾ ಕೆ ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.