|
|---|
ಪುತ್ತೂರು:ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ, ಈ ಹಿನ್ನಲೆ ಟಿಕೆಟ್ ಹಂಚಿಕೆ ವಿಚಾರ ಬಹಳಷ್ಟು ಗೊಂದಲದಲ್ಲಿ ಇದ್ದು ಪುತ್ತೂರು ಕ್ಷೇತ್ರ ಬಗ್ಗೆ ಇನ್ನೂ ಸ್ಪಷ್ಟ ನಿಲುವು ಬಂದಿಲ್ಲ.
ಈ ಹಿನ್ನಲೆಯಲ್ಲಿ ಸದ್ಯ ಪುತ್ತೂರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ಹೆಸರು ಹೈಕಮಾಂಡ್ ಮಟ್ಟದಲ್ಲಿ ಕೇಳುಬರುತ್ತಿದ್ದು.
ಈ ಬಾರಿ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಒತ್ತು ನೀಡುವ ಉದ್ದೇಶದಿಂದ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಸ್ಪಷ್ಟದಂತಾಗಿದೆ.
ಅರುಣ್ ಕುಮಾರ್ ಪುತ್ತಿಲ ಅವರು ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯಕರ್ತರ ಜೊತೆಗೂಡಿ ಕೆಲಸ ಮಾಡುವವರು.ಸದಾ ಕಾರ್ಯಕರ್ತರ ಜೊತೆಗೆ ಅವರ ಹಿರಿಯಣ್ಣನಂತೆ ಇರುವವರು.
ಪುತ್ತೂರಿಗೆ ಫೈರ್ ಬ್ರಾಂಡ್ ನಾಯಕನ ಅವಶ್ಯಕತೆ ಇರುವ ಹಿನ್ನಲೆ ಅರುಣ್ ಪುತ್ತಿಲ ಅವರೇ ಒನ್ ಆಂಡ್ ಒನ್ಲಿ ಚಾಯ್ಸ್.
ಈ ವಿಚಾರವಾಗಿ ಪುತ್ತೂರಿನಲ್ಲಿ ಗೆಲ್ಲುವ ಸಾಮರ್ಥ್ಯ ಪುತ್ತಿಲ ಅವರಿಗೆ ಮಾತ್ರ ಇರುವುದು ಎಂಬುದು ಹಲವರ ಮಾತು.
ಇನ್ನಷ್ಟು ವಿಚಾರಗಳು ಉಳಿದ ದಿನಗಳಲ್ಲಿ ತಿಳಿಯಬೇಕಾಗಿದೆ.
