Breaking

6/trending/recent
Type Here to Get Search Results !

ಪುತ್ತೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ: ಬಿಜೆಪಿ ನಗರ ಮಂಡಲ ಬೂತ್ ಸಂಖ್ಯೆ 55 ಸದಸ್ಯ ಮನೀಶ್ ಕುಲಾಲ್ ಪಕ್ಷದ ಜವಾಬ್ದಾರಿಯಿಂದ ವಜಾ..!!!

ಜಾಹೀರಾತು/Advertisment
ಪುತ್ತೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ: ಬಿಜೆಪಿ ನಗರ ಮಂಡಲ ಬೂತ್ ಸಂಖ್ಯೆ 55 ಸದಸ್ಯ ಮನೀಶ್ ಕುಲಾಲ್ ಪಕ್ಷದ ಜವಾಬ್ದಾರಿಯಿಂದ ವಜಾ..!!!

ವಜಾ ಮಾಡುತ್ತಲೇ ಹಿಂದೂ ಕಾರ್ಯಕರ್ತರ ಆಕ್ರೋಶ ಹೆಚ್ಚಾಗಿದ್ದು,ಪಕ್ಷದ ಪರ ಕೆಲಸ ಮಾಡುವವರು ಪಕ್ಷ ವಿರೋಧಿಗಳೇ ಎಂದು ಪ್ರಶ್ನಿಸುತ್ತಿದ್ದಾರೆ.

ಪುತ್ತೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ: ಬಿಜೆಪಿ ನಗರ ಮಂಡಲ ಬೂತ್ ಸಂಖ್ಯೆ 55 ಸದಸ್ಯ ಮನೀಶ್ ಕುಲಾಲ್ ಪಕ್ಷದ ಜವಾಬ್ದಾರಿಯಿಂದ ವಜಾ..!!!
ಪುತ್ತೂರು: ಬಿಜೆಪಿ ನಗರ ಮಂಡಲ ಬೂತ್ ಸಂಖ್ಯೆ 55 ಸದಸ್ಯ ಮನೀಶ್ ಕುಲಾಲ್ ಬನ್ನೂರು ರವರನ್ನು ಬೂತ್ 55 ರ ಬಿ ಎಲ್ ಎ 2 ರ ಜವಾಬ್ದಾರಿಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಪಕ್ಷ ವಿರೋಧಿ ಚಟುವಟಿಗಳನ್ನು ಗಮನಿಸಿ ಪಕ್ಷದ ತೀರ್ಮಾನದಂತೆ ಶಿಸ್ತು ಕ್ರಮದ ಅನುಸಾರವಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ ಎಂದು ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ತಿಳಿಸಿದ್ದಾರೆ.

ಮನೀಶ್ ಬನ್ನೂರು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಪಕ್ಷ ಹಾಗೂ ಸಂಘಟನೆಗಳ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು ಮತ್ತು ಪಕ್ಷದ ಸಂಘಟನೆಗಳ ಎಲ್ಲಾ ಕಾರ್ಯಕ್ರಮಗಳಲ್ಲಿ ಹಲವು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.

ಪಕ್ಷ ಹಾಗೂ ಸಂಘಟನೆಯಲ್ಲಿ ಬಹಳ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಕೆಲ ದಿನಗಳ ಹಿಂದೆ ಅಮಿತ್ ಶಾ ಬರುವ ವಿಚಾರವಾಗಿ ನಡೆದ ಜಾಥಾದಲ್ಲಿ ಶಾಸಕರು ಹೇಳಿದ ಅಣಬೆ ಹೇಳಿಕೆಯ ವಿಚಾರವನ್ನು ಮನೀಶ್ ಹಾಗೂ ಸಂಗಡಿಗರು ಪ್ರಶ್ನಿಸಿದ್ದು, ಸ್ಪಷ್ಟನೆ ನೀಡುವಂತೆ ಕೇಳಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪಕ್ಷದ ಓರ್ವ ನಿಷ್ಠಾವಂತ ಕಾರ್ಯಕರ್ತನನ್ನು ಏಕಾಏಕಿಯಾಗಿ ಬಿ ಎಲ್ ಎ 2 ಜವಾಬ್ದಾರಿಯಿಂದ ವಜಾಗೊಳಿಸಿರುವುದು ಕೆಲ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ವಿಚಾರ ಮುಂದೆ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಮನೀಶ್ ಪರ ನಿಂತಿರುವ ಹಿಂದೂ ಕಾರ್ಯಕರ್ತರು ನಮ್ಮನು ವಜಾ ಮಾಡಿ,ನಿಮಗೆ ನಿಷ್ಟಾವಂತ ಕಾರ್ಯಕರ್ತರ ಅಗತ್ಯ ಇಲ್ಲ.     ಎನ್ನುತ್ತಿದ್ದಾರೆ.

ಪಕ್ಷ ವಿರೋಧಿ 'ಅಣಬೆ' ಹೇಳಿಕೆ ನೀಡಿದವರು, ಪ್ರಶ್ನೆ ಮಾಡಿದವರಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

ಪುತ್ತೂರಿನ ಈ ಬೆಳವಣಿಗೆ ಬಹುದೊಡ್ಡ ರಾಜಕೀಯ ಬದಲಾವಣೆಗೆ ಸಾಕ್ಷಿ ಆಗಬಹುದು.

ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಬಿಜೆಪಿ ನಾಯಕರಿಗೆ ಕರೆ ಮಾಡಿ ವಿಚಾರಿಸುತ್ತಿದ್ದು ಯಾರು ಕೂಡ ಸೂಕ್ತ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕಾರ್ಯಕರ್ತರು ಬಿಜೆಪಿ ಜಿಲ್ಲಾಧ್ಯಕ್ಷರ ಕರೆ ಮಾಡಿ ವಿಚಾರಿಸಿದ್ದರು,ಪ್ರತಿಕ್ರಯಿಸಿದ ಅವರು ವಿಚಾರ ತಿಳಿದು ಹೇಳುತ್ತೇನೆ ಎಂದಿದ್ದಾರೆ.

ಪುತ್ತಿಲ ರ ಪರ ನಿಂತಿದ್ದೆ ಮನೀಶ್ ಗೆ ಮುಳುವಾಯ್ತ...?

ಬಿಜೆಪಿಯಲ್ಲಿ ನೈಜ್ಯ ಕಾರ್ಯಕರ್ತರ ಕಥೆ ಇಷ್ಟೇನಾ ಎಂಬುದು ಕಾರ್ಯಕರ್ತರ ಪ್ರಶ್ನೆ.


Post a Comment

0 Comments
* Please Don't Spam Here. All the Comments are Reviewed by Admin.