|
|---|
ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭಾಷೆ ಹಿಂದಿ.ಭಾರತೀಯ ಸಂಸ್ಕೃತಿಯನ್ನು ವಿಶ್ವದ ಅತ್ಯಂತ ಹಳೆಯ ಸಂಸ್ಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿನ ಭಾಷೆಗಳು ಸಹ ಅದರ ಪ್ರಾಚೀನತೆಗೆ ಪುರಾವೆಯಾಗಿವೆ.ಹಿಂದಿ ಭಾಷೆಯಲ್ಲಿ ಉನ್ನತ ವ್ಯಾಸಂಗ ಮಾಡಿದವರಿಗೆ ಅನೇಕ ಫೆಲೋಶಿಫ್, ಹೆಚ್ಚಿನ ಅನುದಾನ ಹಾಗೂ ಉತ್ತಮವಾದ ಉದ್ಯೋಗಾವಕಾಶಗಳಿವೆ ಎಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸೇವಾ ನಿವೃತ್ತ ಉಪ ಪ್ರಾಂಶುಪಾಲರಾದ ಹಾಗೂ ಹಿಂದಿ ಪ್ರಾಧ್ಯಾಪಕರಾದ ಶ್ರೀ ಡಾ ವಿಷ್ಣುಭಟ್ ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಹಿಂದಿ ವಿಭಾಗವು ಹಿಂದಿ ಸಂಘದ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಹಿಂದಿ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಕರುಣಾಲಕ್ಷ್ಮಿಯವರು ಹಿಂದಿ ಭಾಷಾ ಕಲಿಕೆಯ ಮಹತ್ವವನ್ನು ವಿವರಿಸಿದರು.ಹಾಗೂ ಹಿಂದಿ ಸಾಹಿತ್ಯದ ಜೊತೆಗೆ ಪ್ರಯೋಜನಮೂಲಕ ಹಿಂದಿಯ ಅಧ್ಯಯನ ಮಾಡುವುದರ ಮೂಲಕ ವಿವಿಧ ಕ್ಷೇತ್ರಗಳಲ್ಲಿ ವಿಫುಲವಾದ ಉದ್ಯೋಗಾವಕಾಶಗಳನ್ನು ಪಡೆಯಬಹುದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ ವರದರಾಜ ಸಿ ಎಚ್ ಇವರು ಮಾತನಾಡಿ ಎಲ್ಲಾ ಭಾಷೆಗಳನ್ನು ಹೋಲಿಸುವಾಗ ಹಿಂದಿ ಭಾಷೆಗೂ ಅದರದ್ದೇ ಆದ ವಿಶಿಷ್ಟ ಸ್ಥಾನವಿದೆ. ತಂತ್ರಜ್ಞಾನದ ಬೆಳವಣಿಗೆಯು ಮುಂದಿನ ಜನಾಂಗದಲ್ಲಿ ಭಾಷಾ ಬೆಳವಣಿಗೆಗೆ ಸವಾಲಾಗಿ ಮಾರ್ಪಾಡಾಗಬಹುದು. ಆದ್ದರಿಂದಲೇ ಮಾತೃಭಾಷೆಯಂತೆಯೇ ಇತರ ಭಾಷೆಯ ಪ್ರಯೋಗ ಮಾಡುವುದರಿಂದ ಭಾಷಾ ಬೆಳವಣಿಗೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕರುಣಾಲಕ್ಷ್ಮಿಯವರನ್ನು ಹಿಂದಿ ಸಂಘದ ಪದಾಧಿಕಾರಿಗಳು ಹಿಂದಿ ಹಾಗೂ ಕನ್ನಡ ಭಾಷಾಂತರದಲ್ಲಿ ಸಾಧಿಸಿದ ವಿಶಿಷ್ಟ ಸಾಧನೆಗೆ ಗೌರವಿಸಿದರು. ಹಾಗೂ ಹಿಂದಿ ಸಂಘದ ಅಧ್ಯಕ್ಷರಾಗಿರುವ ಕವಿತಾ ಎಸ್ ಪೈ ರವರು ಹಿಂದಿ ಭಾಷೆಯಲ್ಲಿ ಬಿ ಎ ಪದವಿ ಹಾಗೂ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಮದ್ರಾಸ್ ಇದರ 8 ಪರೀಕ್ಷೆಗಳಲ್ಲಿ ಉತ್ತಮ ಅಂಕದಲ್ಲಿ ಉತ್ತೀರ್ಣರಾದ ಸಾಧನೆಗೆ ಗೌರವಿಸಲಾಯಿತು. ಹಾಗೂ ಕಾಲೇಜಿನ ಚತುರ್ಮಾಸ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ಡಾ. ಕಾಂತೇಶ್ ಎಸ್ ಹಾಗೂ ಹಿಂದಿ ಸಂಘದ ವಿದ್ಯಾರ್ಥಿ ಪದಾಧಿಕಾರಿಗಳಾದ ಕವಿತಾ.ಎಸ್.ಪೈ ತೃತೀಯ ಬಿ.ಕಾಂ, ಮಧುರಾ.ಕೆ, ದ್ವಿತೀಯ ಬಿ.ಎಸ್ಸಿ ಹಾಗೂ ಪೂಜಾ ತೃತೀಯ ಬಿ.ಕಾಂ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಿಂದಿ ಸಂಘದ ವಿದ್ಯಾರ್ಥಿ ಪದಾಧಿಕಾರಿಯಾದ ಕವಿತಾ.ಎಸ್.ಪೈ ಇವರು ನಿರೂಪಿಸಿದರು. ಜೀವನ್ ರಾಜ್ ಬಿ ಇವರು ಸ್ವಾಗತಿಸಿದರು. ಶೃತಿಕಾ ಪಿ ವಂದನಾರ್ಪಣೆಗೈದರು.