Breaking

6/trending/recent
Type Here to Get Search Results !

ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾರಂಭಕೇಂದ್ರ ಗೃಹ ಸಚಿವ ಅಮಿತ್ ಶಾ,ಸಿಎಂ ಸೇರಿದಂತೆ ಗಣ್ಯರ ಆಗಮನ

ಜಾಹೀರಾತು/Advertisment
ಪುತ್ತೂರು: ಪ್ರತಿಷ್ಠಿತ ಅಂತರ್ ರಾಜ್ಯ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಮತ್ತು ದೇಶದ ಪ್ರಥಮ ಸಹಕಾರಿ ಸಚಿವರಾಗಿರುವ ಅಮಿತ್ ಶಾ ಅವರು ಫೆ.11ರಂದು ಅಪರಾಹ್ನ 4.10ಕ್ಕೆ ತೆಂಕಿಲಕ್ಕೆ ಆಗಮಿಸಿದರು.ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗ, ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಂ.ಕೃಷ್ಣಕುಮಾರ್ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಸಚಿವರನ್ನು ಸ್ವಾಗತಿಸಿ ಬರಮಾಡಿಕೊಂಡರು. 
ತೆಂಕಿಲ ವಿವೇಕಾನಂದ ಶಾಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯುತ್ತಿದ್ದು ಅಮಿತ್ ಶಾ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದ.ಕ.ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರೂ ಜೊತೆಗಿದ್ದರು. ಹನುಮಗಿರಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಹೊರಟು ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಅಮಿತ್ ಶಾ ಅವರು ಅಲ್ಲಿಂದ ಕಾರಲ್ಲಿ ರಸ್ತೆ ಮಾರ್ಗವಾಗಿ ಮುಕ್ರಂಪಾಡಿ-ಬೈಪಾಸ್ ರಸ್ತೆ ಮೂಲಕ ತೆಂಕಿಲಕ್ಕೆ ಆಗಮಿಸಿದರು. ಈ ಸಂದರ್ಭ ರಸ್ತೆಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು ನಾನು ಕಾಂತಾರ ಸಿನಿಮಾ ನೋಡಿ ನಿಮ್ಮ ನಾಡಿನ ಸಂಸ್ಕೃತಿ ಆಚರಣೆ ಬಗ್ಗೆ ತಿಳಿದುಕೊಂಡೆ ಎಂದರು.

ಇದರೊಂದಿಗೆ ನೀವು ಇಲ್ಲಿನ ಜನ ಬೆವರು ಸುರಿಸಿ ಅಡಿಕೆ ಬೆಳಿಸುತ್ತೀರ ನಾವು ಅಡಿಕೆ ತಿಂದು ಬೆವರು ಸುರಿಸುತ್ತೇವೆ ಎಂದು ಗುಜರಾತ್ ಹಾಗೂ ನಮ್ಮ ಕರಾವಳಿಗೆ ಇರುವ ಸಾಮ್ಯತೆ ಬಗ್ಗೆ ಹೇಳಿದರು.

ನಂತರ ಅಭಿವೃದ್ದಿ ಬಗ್ಗೆ ಮಾತನಾಡಿದ ಅವರು ನಾವು ಬಡವರ ಕಲ್ಯಾಣಕ್ಕೆ ಗರೀಬ್ ಕಲ್ಯಾಣ್ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.

ಕ್ಯಾಂಪ್ಕೊ ಸಂಸ್ತೆ ನಿಮ್ಮ ನಾಡಿನ ಉತ್ತಮ ಮಲ್ಟಿ ಸ್ಟೇಟ್ ಸಂಸ್ಥೆ ಎಂದು ಹಾದಿ ಹೊಗಳಿದರು.

ಇದರೊಂದಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾಲು ಎಳೆದ ಅಮಿತ್ ಶಾ ಅವರು ಟಿಪ್ಪು ಸುಲ್ತಾನ್ ಬೆಂಬಲಿಸುವ ಕಾಂಗ್ರೆಸ್,ಜೆಡಿಎಸ್ ಜೊತೆಗೆ ಇದ್ದೀರಾ ಇಲ್ಲಾ ರಾಣಿ ಅಬ್ಬಕ್ಕ ಬೆಂಬಲಿಸುವ ನಮ್ಮ ಜೊತೆಗೆ ಇದ್ದೀರಾ ಎಂದು ಹೇಳಿ ವಿವರಿಸಿದರು.

ಮುಂದಿನಬಾರಿ ಹೆಚ್ಚು ಸೀಟ್ ಗೆಲ್ಲುವ ಮೂಲಕ ನಾವು ಮತ್ತೆ ಅಧಿಕಾರಕ್ಕೆ ಬರಬೇಕು ಎಂದರು.

ಮೋದಿ ಸರಕಾರ ಪಿ.ಎಫ್.ಐ ಬ್ಯಾನ್ ಮಾಡುವ ಮೂಲಕ ದೇಶವಿರೋಧಿ ಕೆಲಸ ಮಾಡುತಿದ್ದ ಸಂಘಟನೆ ಗಳನ್ನು ಉರುಳಿಸಿದೆ.

ಕಾಶ್ಮೀರವನ್ನು ರಕ್ಷದ ಓಕುಳಿ ಎನ್ನುತ್ತಿದ್ದ ಕಾಂಗ್ರೆಸ್ ಇದೀಗ ರಕ್ತ ಬಿಡಿ ಎಲ್ಲರೂ ಸುರಕ್ಷಿತವಾಗಿ ಬಾಳುವಂತೆ ಮಾಡಿದೆ ಬಿಜೆಪಿ ಸರಕಾರ ಎಂದರು.

ಬೆಂಗಳೂರನ್ನು ಸ್ಟಾರ್ಟ್ ಅಪ್ ಗಳ ಹಬ್ ಮಾಡಲಾಗಿದೆ.

ಈ ಮೂಲಕ ಅನೇಕ ಸರಕಾರಿ ಯೋಜನೆಗಳ ಬಗ್ಗೆ ಹೇಳಿದರು.

 ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಕ್ಯಾಂಪ್ಕೋದ ವಿವಿಧ ಯೋಜನೆಗಳಿಗೆ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,ಮಾಜಿ ಸಿಎಂ ಬಿ.ಎಸ್ ಯಡಯೂರಪ್ಪ,ರಾಜ್ಯ ಗೃಹಸಚಿವ ಅಗರ ಜ್ಞಾನೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌, ಬಂದರು ಮೀನುಗಾರಿಕೆ ಸಚಿವ ಎಸ್‌ ಅಂಗಾರ, ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್‌, ಶಾಸಕರಾದ ಸಂಜೀವ ಮಠಂದೂರು, ಹರೀಶ್‌ ಪೂಂಜ, ರಾಜೇಶ್‌ ನಾಯ್ಕ್‌ ಉಳಿಪ್ಪಾಡಿಗುತ್ತು ಸಹಿತ ವಿವಿಧ ಜನಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದಾರೆ.
ಈ ಬಾರಿ ಪೂರ್ಣ ಬಹುಮತದ ಸರಕಾರ ರಚನೆ ಆಗಬೇಕು ಎಂದರು.

ಇದರೊಂದಿಗೆ ಬಿಜೆಪಿಯ ಸಹಸ್ರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.