Breaking

6/trending/recent
Type Here to Get Search Results !

ಪುತ್ತೂರಿನ ಈಶ್ವರಮಂಗಲಕ್ಕೆ ಆಗಮಿಸಿದ ಅಮಿತ್ ಶಾಗೆ ಭರ್ಜರಿ ಸ್ವಾಗತಹನುಮಗಿರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು,ನಂತರ ಅಮರ ಗಿರಿ ಉದ್ಘಾಟಿಸಿದರು

ಜಾಹೀರಾತು/Advertisment
ಪುತ್ತೂರಿನ ಈಶ್ವರಮಂಗಲಕ್ಕೆ ಆಗಮಿಸಿದ ಅಮಿತ್ ಶಾಗೆ ಭರ್ಜರಿ ಸ್ವಾಗತ

ಹನುಮಗಿರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು,ನಂತರ ಅಮರ ಗಿರಿ ಉದ್ಘಾಟಿಸಿದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಶನಿವಾರ ಮಧ್ಯಾಹ್ನ 3 ಗಂಟೆ 8 ನಿಮಿಷದ ವೇಳೆಗೆ ಪುತ್ತೂರು ತಾಲೂಕಿನ ಈಶ್ವರಮಂಗಲಕ್ಕೆ ಆಗಮಿಸಿದ್ದಾರೆ.

ಪಂಚಮುಖಿ ಆಂಜನೇಯನಿಗೆ ಕೈ ಮುಗಿದು ಬೆಳ್ಳಿಯ ಗಧೆಯನ್ನು ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ. 

ಈಶ್ವರಮಂಗಲದಲ್ಲಿ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಗಣ್ಯರು ಉಪಸ್ಥಿತರಿದ್ದು, ಗೃಹ ಸಚಿವರನ್ನು ಸ್ವಾಗತಿಸಿದರು.
ಬಳಿಕ ಅವರು ಈಶ್ವರಮಂಗಲ ಹನುಮಗಿರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಈ ಸಂದರ್ಭ ಮಾಜಿ ಸಿಎಂ ಯಡಿಯೂರಪ್ಪ,ಸಿಎಂ ಬಸವರಾಜ್ ಬೊಮ್ಮಾಯಿ,ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ನಂತರ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅಮಿತ್ ಶಾ, ರಾತ್ರಿ ಮಂಗಳೂರು ಕೆಂಜಾರಿನ ಶ್ರೀದೇವಿ ಕಾಲೇಜಿನಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಸುವರು.



Post a Comment

0 Comments
* Please Don't Spam Here. All the Comments are Reviewed by Admin.