|
|---|
ಸ್ಯಾಂಡಲ್ವುಡ್ ನಲ್ಲಿ 2022 ರಲ್ಲಿ 180 ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗಿವೆ. ಕಟ್ಟಕಡೆಯದಾಗಿ (Upcoming Kannada Expected Movies) ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿವೆ. ಜಮಾಲಿಗುಡ್ಡ, ಪದವಿ ಪೂರ್ವ, ಮೇಡ್ ಇನ್ ಬೆಂಗಳೂರು, ಜೋರ್ಡನ್ ಅನ್ನೋ ಸಿನಿಮಾ ತೆರೆಗೆ ಬರ್ತಿವೆ.
ಆದರೆ ಮುಂದಿನ ವರ್ಷ 2023 ರಲ್ಲಿ (Kannada Movies) ಕನ್ನಡದ ಯಾವ ಸಿನಿಮಾ ರಿಲೀಸ್ ಆಗುತ್ತಿವೆ. ಅದರಲ್ಲಿ ಬಹು ನಿರೀಕ್ಷಿತ ಸಿನಿಮಾಗಳಾವವು. ಕಿಚ್ಚ ಸುದೀಪ್ ಸಿನಿಮಾ ಅನೌನ್ಸ್ (Sandalwood Expected Movie) ಆಗುತ್ತದೆಯೇ? ರಾಕಿಂಗ್ ಸ್ಟಾರ್ ಯಶ್ ಚಿತ್ರ ಜನವರಿ-8ಕ್ಕೆ ಅನೌನ್ಸ್ ಆಗುತ್ತಾ? ಶ್ರೀಮುರಳಿ ಅಭಿನಯದ ಬಘೀರ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ರಿಯಲ್ ಸ್ಟಾರ್ ಉಪ್ಪಿಯ (Real Star Exptect Movies) ಎರಡು ಚಿತ್ರಗಳು ಭಾರೀ ನಿರೀಕ್ಷೆ ಮೂಡಿಸಿವೆ. ಈ ಎಲ್ಲ ಮಾಹಿತಿ ಒಂದು ಸ್ಟೋರಿ ಇಲ್ಲಿದೆ .
ಸ್ಯಾಂಡಲ್ವುಡ್ ಮುಂದಿನ ವರ್ಷದ ಬಹು ನಿರೀಕ್ಷಿತ ಚಿತ್ರಗಳಾವವು?
ಕನ್ನಡದಲ್ಲಿ ಪ್ರತಿವರ್ಷ ಸಾಕಷ್ಟು ಸಿನಿಮಾಗಳು ನಿರ್ಮಾಣಗೊಳ್ಳುತ್ತವೆ. ಇರೋ ಒಂದಷ್ಟು ನಿರ್ಮಾಣ ಸಂಸ್ಥೆಗಳು ಒಂದೋ ಎರಡೋ ಸಿನಿಮಾಗಳನ್ನ ನಿರ್ಮಿಸುತ್ತಲೇ ಬಂದಿವೆ. ಇನ್ನುಳಿದವ್ರು ತಮ್ಮದೇ ರೀತಿಯಲ್ಲಿ ಚಿತ್ರ ನಿರ್ಮಿಸಿ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಾರೆ.
