|
|---|
ಈ ಎಲ್ಲಾ ಅನ್ಯಾಯ ಮತ್ತು ದೌರ್ಜನ್ಯಗಳನ್ನು ನಿಲ್ಲಿಸಬೇಕೆಂದು ಅಸ್ಪೃಶ್ಯರು 1817ರಲ್ಲಿ ರಾಜ್ಯಭಾರ ನಡೆಸುತ್ತಿದ್ದ 2ನೇ ಬಾಜಿರಾಯನಲ್ಲಿ ವಿನಂತಿಸಿಕೊಂಡಾಗ 2ನೇ ಬಾಜಿರಾಯ
ನೀವುಗಳು ಹುಟ್ಟಿರುವುದೇ ನಮ್ಮಗಳ ಸೇವೆ ಮಾಡುವುದ್ದಕ್ಕಾಗಿ., ನಿಮ್ಮ ಹೆಂಗಸರು ಇರುವುದು ನಮ್ಮನ್ನು ಸುಖ ಪಡಿಸಲಿಕ್ಕಾಗಿ., ಇದೇ ನಮ್ಮ ಮನು ಸಂವಿಧಾನ..."". ಎಂದು ಅಸ್ಪೃಶ್ಯರಿಗೆ ಖಡಕ್ಕಾಗಿ ತಿಳಿಸಿದರು.
ರೊಚ್ಚಿಗೆದ್ದ ಅಸ್ಪೃಶ್ಯರು ., "" ಸಿದ್ದನಾಕನ"" ನಾಯಕತ್ವದಲ್ಲಿ 500 ಜನ ಅಸ್ಪೃಶ್ಯ ಯುವಕರು., ಪೇಶ್ವೆಗಳ ವಿರುದ್ದ ಯುದ್ದ ಮಾಡಲು ಸಿದ್ದರಾಗುತ್ತಾರೆ.., 1817ರ ಡಿಸೆಂಬರ್ 31ನೇ ತಾರೀಖು ರಾತ್ರಿ ., ""ಶಿರೂರ್"" ನಿಂದ ಹೊರಡುತ್ತಾರೆ. ಆ ಇಡೀ ರಾತ್ರಿ ಸತತವಾಗಿ 27 ಕಿಲೋಮೀಟರ್ ನಡೆದು ಮಾರನೇ ದಿನ ಅಂದರೆ 1818 ಜನವರಿ 01 ರಂದು "" ಪೂನಾ"" ನಗರದಿಂದ 15 ಕಿಲೋಮೀಟರ್ ದೂರದಲ್ಲಿರುವ ., "" ಭಿಮಾ ನದಿ ತೀರದಲ್ಲಿ"" "" ಕೋರೆಗಾಂವ್"" ಎಂಬ ಸ್ಥಳವನ್ನು ತಲುಪುತ್ತಾರೆ. ಇಡೀ ರಾತ್ರಿ ನಿದ್ದೆ ಇಲ್ಲದೆ 27 ಕಿಲೋಮೀಟರ್ ದೂರವನ್ನು ನಡೆದುಕೊಂಡು ಬಂದಿದ್ದ ಈ ಅಸ್ಪೃಶ್ಯ ಯೋಧರ ಪಡೆ ನಿದ್ದೆ-ಅನ್ನ-ನೀರು., ಯಾವುದನ್ನು ಬಯಸದೆ ಬೆಳಿಗ್ಗೆ 09 ಗಂಟೆಗೆ ಸರಿಯಾಗಿ ಪೇಶ್ವೆ ಸೈನಿಕರ ಮೇಲೆ ಎರಗುತ್ತಾರೆ., 20ಸಾವಿರ ಅಶ್ವದಳ 8 ಸಾವಿರ ಕಾಲ್ದಳ ಸೇರಿ ಒಟ್ಟು 28 ಸಾವಿರ ಪೇಶ್ವೆ ಸೈನಿಕರು 3 ದಿಕ್ಕಿನಿಂದ ಅಸ್ಪೃಶ್ಯ ಯೋಧರಿಗೆ ಎದುರಾಗುತ್ತಾರೆ., ಬೆಳ್ಳಿಗ್ಗೆ 09 ರಿಂದ ರಾತ್ರಿ 09 ರವರೆಗೆ ಸತತ 12 ಗಂಟೆಗಳ ಕಾಲ ನಡೆದ ಈ ಘೋರ ಯುದ್ದದಲ್ಲಿ..
ಹಸಿದ ಹೆಬ್ಬುಲಿಗಳಂತ್ತಿದ್ದ ಅಸ್ಪೃಶ್ಯ ಯೋಧರು ಪೇಶ್ವೆ ಸೈನ್ಯವನ್ನು ದೂಳಿಪಟ ಮಾಡುತ್ತಾರೆ.""
ಸಿದ್ದನಾಕನ"" ನಾಯಕತ್ವದಲ್ಲಿ 500 ಜನ ಅಸ್ಪೃಶ್ಯ ಸೈನಿಕರು 28 ಸಾವಿರ ಸೈನಿಕರಿದ್ದ 2ನೇ ಬಾಜಿರಾಯನ ಸೈನ್ಯವನ್ನು ಹೊಡೆದುರುಳಿಸಿದ ದಿನವೇ ಈ ಜನವರಿ 01
ಅಂದಿನ ರಣರಂಗದ ರಭಸ ಇಂದಿಗೂ ಅಜರಾಮರ..
ಅಂದಿನ ವೀರ ಸಂಹಗಳಿಗೆ ಇಂದು ನಮ್ಮ "" ನೀಲಿ"" ಸಲಾಮುಗಳು...
ನನ್ನ ಜನರ ದಿಗ್ವಿಜಯದ ದಿನವನ್ನು ಸಂಭ್ರಮದಿಂದ ಆಚರಿಸುವ ಎಲ್ಲಾ ಜನತೆಗೂ ಹೊಸ ವರ್ಷದ ಶುಭಾಶಯಗಳು
