Breaking

6/trending/recent
Type Here to Get Search Results !

ಬಡ ಡಯಾಲಿಸೀಸ್ ರೋಗಿಗಳಿಗೆ ಹೆಲ್ತ್ ಪ್ಲಸ್ ನಿಂದ ಉಚಿತ ಔಷದಿ ಕಿಟ್ ವಿತರಣೆ:

ಜಾಹೀರಾತು/Advertisment
ಬಡ ಡಯಾಲಿಸೀಸ್ ರೋಗಿಗಳಿಗೆ ಹೆಲ್ತ್ ಪ್ಲಸ್ ನಿಂದ ಉಚಿತ ಔಷದಿ ಕಿಟ್ ವಿತರಣೆ:
 ಪುತ್ತೂರು ತಾ 15/07/2023 ರಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಮಾಡಿಸಿಕೊಳ್ಳುವವರ ಪೈಕಿ ತೀರಾ ಬಡವರಾಗಿದ್ದ 20 ಜನ ಡಯಾಲಿಸೀಸ್ ರೋಗಿಗಳಿಗೆ ಪ್ರತೀ ತಿಂಗಳು 1000/- ರೂಪಾಯಿಯ ಔಷಧಿ ಮತ್ತು ಡಯಾಲಿಸೀಸ್ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಸೇವಿಸಲು ತಿಂಗಳ 480/- ರೂಪಾಯಿಯ ಕೂಪನ್ ಅನ್ನು ಪುತೂರು ಬೊಳ್ವಾರಿನಲ್ಲಿರುವ ಹೆಲ್ತ್ ಪ್ಲಸ್ ಮೆಡಿಕಲ್ ನವರ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ಮೂಲಕ ಒಂದು ವರ್ಷದ ಉಚಿತ ಮೆಡಿಸಿನ್ ನ ಕಾರ್ಡ್ ನೀಡಲಾಯಿತು.
ಅನಿವಾಸಿ ಬಾರತೀಯ ಅಬ್ದುಲ್ ಸತ್ತರ್ ಮತ್ತು ತೌಸಿರ್ ಅಹಮದ್ ರವರು ಈ ಕೊಡುಗೆಗೆ ಸಹಕರಿಸಿದ್ದಾರೆ.

ಈ ಮದ್ಯೆ ಹೆಲ್ತ್ ಪ್ಲಸ್ ಮೆಡಿಕಲ್ಸ್ ನ ಪಾಲುದಾರರಾದ ಆಸಿಫ್ ಮತ್ತು ಅಕ್ಬರ್ ರವರು ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ರಿಯಾಯಿತಿಯಲ್ಲಿ ಔಷದಿ ನೀಡುವ ಕುರಿತು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ ಜಯದೀಪ್ ರವರು ಮಾತನಾಡಿ ಈಗಾಗಲೇ ರೋಟರಿ ಮೂಲಕ 6 ಡಯಾಲಿಸೀಸ್ ಮೆಶಿನ್ ಸರಕಾರಿ ಆಸ್ಪತ್ರೆಗೆ ಬಂದಿದ್ದು ಒಟ್ಟು 12 ,ಮೆಶಿನ್ ಕಾರ್ಯಚರಿಸುತ್ತಿದ್ದು 94 ಜನ ರೋಗಿಗಳ ಪೈಕಿ ತೀರಾ ಬಡವರನ್ನ ಹುಡುಕಿ ಮಾಡುವ ಈ ಸೇವೆ ಅತೀ ಉತ್ತಮವಾದುದು ಆಗಿದೆ.
ಸಂಘ ಸಂಸ್ತೆ ಮತ್ತು ಇನ್ನಿತರ ರಿಂದ ರೋಗಿಗಳಿಗೆ ಸಹಾಯ ಆದಾಗ ಅವರ ಕಷ್ಟ ತಕ್ಕ ಮಟ್ಟಿಗೆ ಪರಿಹಾರ ಆಗುತ್ತದೆ ಎಂದರು

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿಸ ಜನಾಬ್ ಸರ್ಫ಼ುದ್ದೀನ್ ತಂಗಳ್ ರವರು ಇಂತಹಾ ಕಾರ್ಯ ಶ್ಲಾಘನೆಯಲ್ಲಿ ಶ್ಲಾಘನೀಯವಾಗಿದ್ದು, ಸಮಾಜದ ಕಟ್ಟಕಡೇಯ ವ್ಯಕ್ತಿ ರೋಗಿ ಆಗಿದ್ದು , ನಿರಂತರ ರೋಗಿಗಳಿಗೆ ಮಾಡುವ ಈ ನೇರ ಸಹಾಯದ ಪ್ರತಿಫಲ ಕೊಟ್ಟವನಿಗೂ ಕೊಡಿಸಿದವನಿಗೂ ಇಹದಲ್ಲೂ ಪರದಲ್ಲೂ ಲಭಿಸುವುದು ಆಗಿದೆ.
ಜನ ಹೆಚ್ಚು ಹೆಚ್ಚು ಇಂತಹಾ ರೋಗಿಗಳಿಗೆ ಸಹಾಯ ಮಾಡಬೇಕಿದೆ ಎಂದರು.

ಇನ್ನೊರ್ವ ಅತಿಥಿ ಪತ್ರಕರ್ತ ಸಂಶುದ್ದೀನ್ ಮಾತನಾಡಿ ಹೆಲ್ತ್ ಪ್ಲಸ್ ಮೆಡಿಕಲ್ ಮೂಲಕ ಹೆಲ್ತ್ ಪ್ಲಸ್ ಹೆಲ್ಪ್ ಸೆಂಟರ್ ನವರು ಕೊಡಮಾಡುವ ಈ ಒಂದು ದಾನದಲ್ಲಿ ಸರ್ವ ದರ್ಮದವರು ಇದ್ದು ಇದು ಎಲ್ಲರ ಮನ ಗೆಲ್ಲುವ ಸಂಗತಿಯಾಗಿದೆ,ಸಮಾಜ ಸೇವೆಯಲ್ಲಿ ಅತೀ ಉತ್ತಮ ಸೇವೆ ಇದಾಗಿದ್ದು ಹೆಲ್ತ್ ಸೆಂಟರ್ ನವರ ಈ ಸೇವೆಯನ್ನು ಶ್ಲಾಘಿಸಿದರು ಇದರೊಂದಿಗೆ ಸರಕಾರಿ ಆಸ್ಪತ್ರೆಯ ವ್ಯವಸ್ತೆಯ ಬಗ್ಗೆ ಒರ್ವ ಪತ್ರಕರ್ತರಾಗಿ ಶ್ಲಾಘನೆ ವ್ಯಕ್ತಪಡಿಸಿದರು.

 ಕಾರ್ಯಕ್ರಮದಲ್ಲಿ 15 ಜನ ರೋಗಿಗಳಿಗೆ iಹೆಲ್ತ್ ಕಾರ್ಡ್ ನೀದುವ ವ್ಯವಸ್ತೆ ಮಾಡಿದ್ದು ಮುಂದೆ ಇನ್ನಷ್ಟು ರೋಗಿಗಳಿಗೆ ಸಾದ್ಯವಾದರೆ ಸಹಕಾರ ನೀಡುವವರ ಸಹಾಯ ವದಗಿಸಲು ಪ್ರಯತ್ನಿಸಲಾಗುವುದು ಎಂದು ಪುತ್ತೂರು ಸರಕಾರಿ ಆಸ್ಪತ್ರೆಯ ಮಾಜಿ ಆರೋಗ್ಯ ರಕ್ಷಾ ಸಮೀತಿ ಸದಸ್ಯರಾದ ರಫೀಕ್ ದರ್ಬೆ ತಿಳಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.