Breaking

6/trending/recent
Type Here to Get Search Results !

ಬೆಟ್ಟಂಪಾಡಿ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ "ಕಾಮ್ ಕ್ವೆಸ್ಟ್ - 2023"

ಜಾಹೀರಾತು/Advertisment
ಬೆಟ್ಟಂಪಾಡಿ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ "ಕಾಮ್ ಕ್ವೆಸ್ಟ್ - 2023"

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ವಾಣಿಜ್ಯ ವಿಭಾಗ, ಐ.ಕ್ಯೂ.ಎ.ಸಿ ಹಾಗೂ ವಾಣಿಜ್ಯ ಸಂಘದ ವತಿಯಿಂದ ಜೂನ್ 17 ರಂದು ಕಾಲೇಜು ಮಟ್ಟದ ಕಾಮ್ ಕ್ವೆಸ್ಟ್ 2023 ಕಾರ್ಯಕ್ರಮವು ನೆರವೇರಿತು.  
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ. ನವೀನ್ ರೈ ಚೆಲ್ಯಡ್ಕ ಇವರು ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದರಲ್ಲದೆ ವಿದ್ಯಾರ್ಥಿಗಳೇ ಆಯೋಜಿಸುತ್ತಿರುವುದರ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. 
ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರಲ್ಲದೆ, ಪದವಿ ವಿದ್ಯಾರ್ಥಿಗಳಲ್ಲಿ ಉನ್ನತ ವ್ಯಾಸಂಗದ ಅರಿವು ಮೂಡಲು ಇಂತಹ ಕಾರ್ಯಕ್ರಮಗಳು ದಾರಿದೀಪವಾಗುವುದು ಎಂದು ಹೇಳಿದರು. 

ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರಥಮ ಹಾಗೂ ದ್ವಿತೀಯ ಬಿ ಕಾಂ ವಿದ್ಯಾರ್ಥಿಗಳಿಗೆ ವಿವಿಧ ವಾಣಿಜ್ಯ ಸ್ಪರ್ಧೆಗಳನ್ನು ನಡೆಸಲಾಯಿತು. ಬೆಸ್ಟ್ ಮ್ಯಾನೇಜರ್, ಫಿನಾನ್ಸ್, ಮಾರ್ಕೆಟಿಂಗ್, ಹ್ಯುಮನ್ ರಿಸೋರ್ಸ್, ಕೊಲ್ಯಾಜ್, ಟ್ರೆಷರಿ ಹಂಟ್, ಕ್ವಿಜ್ ಮುಂತಾದ ಸ್ಪರ್ಧೆಗಳನ್ನು ತೃತೀಯ ಬಿ ಕಾಂ ವಿದ್ಯಾರ್ಥಿಗಳು ಆಯೋಜಿಸಿದರು. 

ಇದರ ಜೊತೆಗೆ ಮುಂದೆ ಪದವಿ ವ್ಯಾಸಂಗಕ್ಕೆ ದಾಖಲಾಗಿರುವ ವಿದ್ಯಾರ್ಥಿಗಳ ಜೊತೆಗೆ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಹರಿಪ್ರಸಾದ್ ಎಸ್ ಇವರು ಸಂವಾದ ನಡೆಸಿದರು. ಈ ವಿದ್ಯಾರ್ಥಿಗಳಿಗೆ ಹಾಗೆಯೇ ಕಾಲೇಜಿನ ಇತರ ವಿಭಾಗದ ವಿದ್ಯಾರ್ಥಿಗಳಿಗೂ ಸ್ಪರ್ಧೆಗಳನ್ನು ನಡೆಸಲಾಯಿತು. 

ಈ ಎಲ್ಲಾ ಸ್ಪರ್ಧೆಗಳಿಗೆ ನಮ್ಮ ಕಾಲೇಜಿನ ಉಪನ್ಯಾಸಕರ ಜೊತೆಗೆ ಇತರ ಕಾಲೇಜಿನ ಉಪನ್ಯಾಸಕರಾದ ಶ್ರೀ. ಶಿವಪ್ರಸಾದ್ ಕೆ ಆರ್, ಶ್ರೀ. ನವೀನ್ ಕುಮಾರ್, ಶ್ರೀಮತಿ ವಿನುತಾ ಹಾಗೂ ಹಿರಿಯ ವಿದ್ಯಾರ್ಥಿಗಳಾದ ನವ್ಯ ಶ್ರೀ, ಹರಿಣಾಕ್ಷಿ, ಅಶ್ವಿನಿ, ಭವ್ಯ ಇವರುಗಳು ತೀರ್ಪುಗಾರರಾಗಿ ಸಹಕರಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ. ಅವಿನಾಶ್ ರೈ ಕುಡ್ಚಿಲ ಇವರು ಬಹುಮಾನ ವಿತರಿಸಿದರು. ಐಕ್ಯೂಎಸಿ ಸಂಚಾಲಕರಾದ ಡಾ. ಕಾಂತೇಶ್ ಎಸ್ ಇವರು ಮಾತನಾಡಿ ವಿಜೇತರಿಗೆ ಶುಭ ಹಾರೈಸಿದರು ಅಲ್ಲದೆ ಗೆಲುವಿನಷ್ಟೇ ಮಹತ್ವ ಭಾಗವಹಿಸುವಿಕೆಗೂ ಇದೆ ಎಂದು ಅಭಿಪ್ರಾಯಪಟ್ಟರು. 

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ. ಹರಿಪ್ರಸಾದ್ ಎಸ್ ಇವರು ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸರ್ವರಿಗೂ ವಂದಿಸಿದರಲ್ಲದೆ ಈ ರೀತಿಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಲಿ ಎಂದು ಹೇಳಿದರು. 

ಒಟ್ಟು ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಸಂಧ್ಯಾಲಕ್ಷ್ಮಿ, ಶ್ರೀಮತಿ ಶಶಿಕಲ, ಶ್ರೀಮತಿ ಹರ್ಷಿತ ಹಾಗೂ ವಿವಿಧ ಉಪನ್ಯಾಸಕರುಗಳು ಸಹಕರಿಸಿದರು. ವಾಣಿಜ್ಯ ಸಂಘದ ಪದಾಧಿಕಾರಿಗಳು ಹಾಗೂ ವಾಣಿಜ್ಯ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.