|
|---|
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುತ್ತೇವೆ ಎಂದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಪುತ್ತೂರು:ಪುತ್ತೂರು ಬಜರಂಗದಳ ಪ್ರಖಂಡ ವತಿಯಿಂದ ಮಧ್ಯರಾತ್ರಿಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಬಜರಂಗದಳ ನಿಷೇಧ ಮಾಡ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ ದೇಶಸೇವೆ ಮಾಡುತ್ತಿರುವ ಬಜರಂಗದಳ ನಿಷೇಧ ಮಾಡಲು ಹೊರಟಿದ್ದಾರೆ, ಕೋವಿಡ್ ಮಹಮಾರಿಯ ಸಂದರ್ಭ ದೇಶಾದ್ಯಂತ ಬಜರಂಗದಳ ಕಾರ್ಯಕರ್ತರು ನಡೆಸಿದ ಸೇವೆ ಅಪಾರ.ಇಂತಹ ಸಂಘಟನೆ ಕುರಿತು ಈ ರೀತಿ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕಾರ ಎಂದರು.
ನಂತರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರಮುಖರಾದ ಮುರಳಿಕೃಷ್ಣ ಹಸಂತಡ್ಕ,ದಿನೇಶ್ ಜೈನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.