Breaking

6/trending/recent
Type Here to Get Search Results !

ತರ್ಬೀಯತುಲ್ ಹುದಾ ಅಸೋಸಿಯೇಷನ್ ವತಿಯಿಂದ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ರಂಝಾನ್ ಕಿಟ್ ವಿತರಣೆ

ಜಾಹೀರಾತು/Advertisment
ತರ್ಬೀಯತುಲ್ ಹುದಾ ಅಸೋಸಿಯೇಷನ್ ವತಿಯಿಂದ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ರಂಝಾನ್ ಕಿಟ್ ವಿತರಣೆ

ಪುತ್ತೂರು: ಮೈದಾನಿಮೂಲೆ ತರ್ಬೀಯತುಲ್ ಹುದಾ ಅಸೋಸಿಯೇಷನ್ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮಹ್ಲರತುಲ್ ಬದ್ರಿಯ್ಯಾ ಮಜ್ಲಿಸ್, ಏರ್ವಾಡಿ ಮಜ್ಲಿಸ್ ಮತ್ತು ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮದ ಐದನೇ ವರ್ಷದ ವಾರ್ಷಿಕೋತ್ಸವವು ಬೃಹತ್ ಬುರ್ದಾ ಮಜ್ಲಿಸ್ ಸಮಾರಂಭದೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿಗಳಾದ ಯೂಸುಫ್ ಹಾಜಿ ಕೈಕಾರ ವಹಿಸಿದರು. ಮೈದಾನಿಮೂಲೆ ಮುಹ್ಯದ್ದೀನ್ ಜುಮಾ ಮಸೀದಿ ಖತೀಬರಾದ ಅಬೂಶಝ ಅಬ್ದುಲ್ ರಝಾಖ್ ಖಾಸಿಮಿ ಉದ್ಘಾಟಿಸಿದರು. ಸ್ನೇಹಜೀವಿ ಹಾರಿಸ್ ಅಡ್ಕ ಪ್ರಾಸ್ತಾವಿಕ ನುಡಿಯನ್ನಾಡಿದರು. ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ದುಃಆ ಆಶಿರ್ವಚಿಸಿದರು. ಕೇರಳದ ಪ್ರಮುಖ ಬುರ್ದಾ ಬಳಗದಿಂದ ಬೃಹತ್ ಬುರ್ದಾ ಮಜ್ಲಿಸ್ ನಡೆಯಿತು. ಉನ್ನತ ಅಧ್ಯಯನವನ್ನು ನಡೆಸಿ ಬಿರುದುದಾರಿಯಾದ ರವೂಫ್ ಅಲ್ ಹಾಶಿಮಿ, ಶಾಕಿರ್ ಸಖಾಫಿ, ನಾಸಿರ್ ರಝ್ವಿ ಹಾಗೂ ಗಡಿನಾಡ ಸಧ್ಭಾವನ ಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ ಅಬೂನಜ ಉಸ್ತಾದ್, ಐದು ವರ್ಷಗಳಿಂದ ತರ್ಬೀಯತುಲ್ ಹುದಾ ಅಸೋಸಿಯೇಷನ್ ಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಿದ ಅಬ್ದುಲ್ ರಹಮಾನ್ ಹಾಜಿ ಅರಿಯಡ್ಕ ಮತ್ತು ಯೂಸುಫ್ ಹಾಜಿ ಕೈಕಾರ ಇವರನ್ನೂ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷರಾದ ಮ‌ಹಮ್ಮದ್ ರಫೀಕ್ ಕೆ.ಪಿ. ಆಗಮಿಸಿದ್ದರು. ಮುಹಮ್ಮದ್ ಯು.ಕೆ, ಅಬ್ದುರ್ರಹ್ಮಾನ್ ಶಾಂತಿಗೋಡು, ಅಶ್ರಫ್ ಉಜಿರೋಡಿ, ಮುಹಮ್ಮದ್ ಮೈದಾನಿಮೂಲೆ, ಹಂಝ ಯು.ಕೆ, ಇಬ್ರಾಹಿಂ ಖಲೀಲ್ ಮತ್ತಿತರರು ಉಪಸ್ಥಿತರಿದ್ದರು. ರಫೀಖ್ ಇಮ್ದಾದಿ ಅಲ್ ಬದವಿ ಸ್ವಾಗತಿಸಿ, ನಾಸಿರ್ ರಝ್ವಿ ವಂದಿಸಿದರು. ಇಕ್ಬಾಲ್ ಚೆನ್ನಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.

Post a Comment

0 Comments
* Please Don't Spam Here. All the Comments are Reviewed by Admin.