Breaking

6/trending/recent
Type Here to Get Search Results !

ಬೆಟ್ಟಂಪಾಡಿ ಕಾಲೇಜಿನ ಎನ್ ಎಸ್ ಎಸ್ ಶಿಬಿರದ ಅಂಗವಾಗಿ ಮುಂಡೂರು ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

ಜಾಹೀರಾತು/Advertisment
ಬೆಟ್ಟಂಪಾಡಿ ಕಾಲೇಜಿನ ಎನ್ ಎಸ್ ಎಸ್ ಶಿಬಿರದ ಅಂಗವಾಗಿ ಮುಂಡೂರು ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ
ದ ಕ ಜಿ ಪಂ ಸ ಹಿ ಪ್ರಾ ಶಾಲೆ,ಮುಂಡೂರು ೧ ಇಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು,ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಭಾಗವಾಗಿ ಪುತ್ತೂರಿನ ವಿಷನ್ ಐ ಕೇರ್ ಆಪ್ಟಿಕಲ್ಸ್ ಇವರ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆಯು ನಡೆಯಿತು. ಈ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ಎ ಯು ಪಿ ಶಾಲೆ ಸ್ವರ್ಗ ಇಲ್ಲಿನ ನಿವೃತ್ತ ಮುಖ್ಯ ಗುರುಗಳಾದ ಶ್ರೀ ರಾಮಯ್ಯ ರೈ ನುಳಿಯಾಲು ಇವರು ಉದ್ಘಾಟಿಸಿದರು . 

          ಶಿಬಿರಾರ್ಥಿಗಳು,ಪೋಷಕರು,ಊರವರು ಹಾಗೂ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು. ಡಾ.ಸುಜನ್ ರಾಜ್ ,ಭವ್ಯ ಕುಮಾರಿ ಮತ್ತು ಪೂಜಾ ಇವರು ತಪಾಸಣೆಯನ್ನು ನಡೆಸಿದರು.ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಆಶಾ, ಶಿಕ್ಷಕಿಯರಾದ ಶ್ರೀಮತಿ ಸಾವಿತ್ರಿ ಟಿ ಹಾಗೂ ಸೌಮ್ಯ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಭಾಸ್ಕರ ಕರ್ಕೇರ, ಶಿಬಿರಾಧಿಕಾರಿಗಳಾದ ಶ್ರೀ ಹರಿಪ್ರಸಾದ್ ಎಸ್ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ನವ್ಯಶ್ರೀ ಸ್ವಾಗತಿಸಿದರು, ರಮ್ಯಶ್ರೀ ವಂದಿಸಿದರು. ಅನನ್ಯ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.