|
|---|
ಪುತ್ತೂರಿನ ನೆಲ್ಲಿಕಟ್ಟೆ ಪಾರ್ಕ್ ನಲ್ಲಿ ಬೆಂಕಿ,ಬೆಂಕಿ ನಂದಿಸಿದ ಸ್ಥಳೀಯರು.ಪುತ್ತೂರಿನ ನೆಲ್ಲಿಕಟ್ಟೆ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿ ಇರುವ ನೆಲ್ಲಿಕಟ್ಟೆ ಪಾರ್ಕ್ ನಲ್ಲಿ ಎಲೆಕ್ಟ್ರಿಕ್ ವೈರ್ ಕಟ್ ಆಗಿ ಬಿದ್ದ ಕಾರಣ ಪಾರ್ಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣ ಜಾಗೃತರಾದ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಈ ಮೂಲಕ ಸ್ಥಳೀಯರು ಸೇರಿಕೊಂಡು ಬೆಂಕಿ ನಂದಿಸಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಪೂರ್ಣ ಪ್ರಮಾಣದಲ್ಲಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ.
ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿ ಆಗಿತ್ತು.