Breaking

6/trending/recent
Type Here to Get Search Results !

ವಿಧಾನ ಸಭಾ ಚುನಾವಣೆ :‘ಪುತ್ತೂರಿಗೆ ಪುತ್ತಿಲ’ ಟ್ವೀಟರ್ ಅಭಿಯಾನ ; ಶಬರಿಮಲೆಗೆ ಪಾದಾಯಾತ್ರೆಯ ಹರಕೆ ಹೊತ್ತ ಕಾರ್ಯಕರ್ತರು

ಜಾಹೀರಾತು/Advertisment

ವಿಧಾನ ಸಭಾ ಚುನಾವಣೆ : ‘ಪುತ್ತೂರಿಗೆ ಪುತ್ತಿಲ’ ಟ್ವೀಟರ್ ಅಭಿಯಾನ ; ಶಬರಿಮಲೆಗೆ ಪಾದಾಯಾತ್ರೆಯ ಹರಕೆ ಹೊತ್ತ ಕಾರ್ಯಕರ್ತರು
ವಿಧಾನಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹಲವಾರು ಅಭ್ಯರ್ಥಿಗಳ ಹೆಸರು ಮುನ್ನಲೆಯಲ್ಲಿ ಕೇಳಿ ಬರುತ್ತಿದೆ. ಭಾರತೀಯ ಜನತಾ ಪಾರ್ಟಿಯಿಂದ ಈ ಭಾರೀಯಾದರೂ ಅರುಣ್ ಕುಮಾರ್ ಪುತ್ತಿಲ ರವರಿಗೆ ಸ್ಪರ್ಧಿಸಲು ಅವಕಾಶ ಸಿಗಬೇಕೆನ್ನುವುದು ಸಾವಿರಾರು ಜನರ ಆಶಯವಾಗಿದೆ.


 ಈ ಬಾರಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಿಂದೂ ಸಂಘಟನೆಗಳ ಮುಖಂಡ, ಧಾರ್ಮಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ ರವರಿಗೆ ಸ್ಪರ್ಧಿಸಲು ಅವಕಾಶ ಸಿಗಬೇಕೆನ್ನುವುದು ಹಲವರ ಆಶಯವಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ಪ್ರಾರಂಭವಾಗಿವೆ.

ಅರುಣ್ ಕುಮಾರ್ ಪುತ್ತಿಲ ರವರಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಟ್ವೀಟರ್ ಅಭಿಯಾನ ಕೂಡ ಪ್ರಾರಂಭವಾಗಿದೆ. ಜ.29 ರಂದು ಈ ಅಭಿಯಾನ ನಡೆಯಲಿದೆ.ಅದೇ ರೀತಿ ಇಬ್ಬರು ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ರವರಿಗೆ ಈ ಬಾರಿ ಸ್ಪರ್ಧಿಸಲು ಅವಕಾಶ ಸಿಗಬೇಕೆಂದು ಕೋರಿ ದೇವರ ಮೊರೆ ಹೋಗಿದ್ದಾರೆ.
ಪ್ರವೀಶ್ ಈಶ್ವರಮಂಗಲ ಮತ್ತು ಅಶೋಕ್ ಬಲ್ಪ ಸುಬ್ರಹ್ಮಣ್ಯ ಎಂಬ ಇಬ್ಬರು ಕಾರ್ಯಕರ್ತರು ಈ ಬಾರಿ ಪುತ್ತಿಲರನ್ನು ಪುತ್ತೂರಿನ ಭಾಜಪ ಅಭ್ಯರ್ಥಿಯಾಗಿ ಆಯ್ಕೆ ಮಾಡುವಲ್ಲಿ ಯಾವುದೇ ಅಡೆ ತಡೆಗಳು ಬಾರದಂತೆ ಮತ್ತು ಕಾಣದ ಕೈಗಳು ಕೆಲಸ ಮಾಡದಂತೆ ನಿರ್ವಿಘ್ನದಿಂದ ಅಭ್ಯರ್ಥಿಯಾಗಿ ಆಯ್ಕೆಯಾದರೆ ಶ್ರೀ ಕ್ಷೇತ್ರ ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡುವುದಾಗಿ ಅಯ್ಯಪ್ಪನಿಗೆ ಹರಕೆ ಸಲ್ಲಿಸಿದ್ದು, ಈ ವಿಚಾರ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಇವರುಗಳ ಈ ಅಭಿಮಾನಕ್ಕೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಇದಲ್ಲವೇ ಅಭಿಮಾನ ಎಂದೆಲ್ಲಾ ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

ಇಷ್ಟು ಕಾರ್ಯಕರ್ತರ ನೆಚ್ಚಿನ ನಾಯಕನಿಗೆ ಬಿಜೆಪಿ ಟಿಕೆಟ್ ನೀಡುತ್ತಾ ಎನ್ನುವುದೇ ಯಕ್ಷಪ್ರಶ್ನೆ.

Post a Comment

0 Comments
* Please Don't Spam Here. All the Comments are Reviewed by Admin.